ಆಕಸ್ಮಿಕ ಬೆಂಕಿ ತಗು ಲಿದ ಪರಿಣಾಮ ಸುಮಾರು ರೂ 1.50 ಕೋಟಿ ಮೌಲ್ಯದ 34 ಹೊಚ್ಚ ಹೊಸ ಕಾರುಗಳು ಬೆಂಕಿಗೆ ಆಹುತಿ ಯಾ ಗಿ ರುವ ಘಟನೆ ಮೈಸೂರು ನಗರದ ಹೊರ ವಲ ಯದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಮೈಸೂರು: ಆಕಸ್ಮಿಕ ಬೆಂಕಿ ತಗು ಲಿದ ಪರಿಣಾಮ ಸುಮಾರು ರೂ 1.50 ಕೋಟಿ ಮೌಲ್ಯದ 34 ಹೊಚ್ಚ ಹೊಸ ಕಾರುಗಳು ಬೆಂಕಿಗೆ ಆಹುತಿ ಯಾ ಗಿ ರುವ ಘಟನೆ ನಗರದ ಹೊರ ವಲ ಯದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಕಾಂತರಾಜ ಅರಸ್ ಕಾರು ಮಾರಾಟ ಸಂಸ್ಥೆಗೆ ಸೇರಿದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ದಾಸ್ತಾನು ಘಟಕ ದಲ್ಲಿ ಈ ಘಟನೆ ಸಂಭವಿಸಿದೆ. ಟಾಟಾ ಮತ್ತು ಫಿಯಟ್ ಕಂಪೆನಿಗಳಿಗೆ ಸೇರಿದ ರೂ.5 ಕೋಟಿ ಮೌಲ್ಯದ 130 ಕಾರು ಗಳನ್ನು ನಿಲುಗಡೆ ಮಾಡಿದ್ದ ಸಂದರ್ಭ ದಲ್ಲಿ ಮಧ್ಯಾಹ್ನ 2.30ರ ಸುಮಾರಿ ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪುಟ್ಟಸ್ವಾಮಿ ಬೆಂಕಿ ಹೊತ್ತಿಕೊಂಡ ಕೂಡಲೇ ಅಗ್ನಿ ಶಾಮಕ ಪೊಲೀಸರಿಗೆ ವಿಷಯ ಮುಟ್ಟಿ ಸಿ ದ್ದಾರೆ. ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ಆಗಮಿಸಿದವು. ಅಗ್ನಿ ಶಾಮಕ ಸಿಬ್ಬಂದಿ ಸತತ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.ಬೆಂಕಿಗಾಹುತಿಯಾದ ಕಾರುಗಳನ್ನು ಹೊರತುಪಡಿಸಿ ನಿಲುಗಡೆ ಮಾಡ ಲಾಗಿದ್ದ 10 ಕಾರುಗಳಿಗೆ ಬೆಂಕಿಯಿಂದ ಅನಾಹುತವಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮೇಟಗಳ್ಳಿ ಪೊಲೀಸರು ತಿಳಿಸಿದ್ದಾರೆ.
No comments:
Post a Comment