ಆನೇಕಲ್: ಕರ್ಪೂರು ಬಳಿಯ ಖಾಸಗಿ ಕಾರ್ಖಾನೆಯೊಂದಕ್ಕೆ ಶುಕ್ರವಾರ ಸಂಜೆ ಬೆಂಕಿ ಬಿದ್ದ ಪರಿಣಾಮ ಅಂದಾಜು ರೂ 5 ಕೋಟಿಗೂ ಹೆಚ್ಚು ನಷ್ಟ ಸಂಭಸಿದೆ. ಆನೇಕಲ್-ಅತ್ತಿಬೆಲೆ ರಸ್ತೆಯ ಕರ್ಪೂರು ಬಳಿಯ ಕೆ.ಕೆ.ನಾಗ್ ಲಿಮಿಟೆಡ್ ಕಾರ್ಖಾನೆಯಲ್ಲಿ ಸಂಜೆ 6ರ ಸುಮಾರಿನಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಕಾರ್ಖಾನೆ ಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಸಿಡಿದ ಬೆಂಕಿಯಿಂದಾಗಿ ಥರ್ಮ ಕೋಲ್ ಗಳು ಹೊತ್ತಿ ಕೊಂಡು ಉರಿ ಯಲು ಪ್ರಾರಂಭವಾದವು. ಈ ಬೆಂಕಿ ಕೆನ್ನಾಲಿಗೆ ಕಾರ್ಖಾ ನೆಯ ಎಲ್ಲಾ ಭಾಗಗಳಿಗೆ ವ್ಯಾಪಿಸಿತು. ಎಷ್ಟೇ ಪ್ರಯತ್ನಪಟ್ಟರು ಬೆಂಕಿ ನಂದಿ ಸಲು ಸಾಧ್ಯವಾಗಲಿಲ್ಲ. ಕಾರ್ಖಾನೆಯ ಮೇಲ್ಛಾವಣಿ ಆರ್.ಸಿ.ಸಿ ಶೀಟು ಗಳಿಂದ ಕಟ್ಟಲಾಗಿತ್ತು. ಕಾರ್ಖಾನೆ ಯೊ ಳಗಿನ ಬೆಂಕಿ ಮೇಲ್ಛಾ ವಣಿಯ ಶೀಟು ಗಳಿಗೂ ಸಹ ಹಬ್ಬಿತು. ಬೆಂಕಿಯ ಜ್ವಾಲೆ ಎಲ್ಲೆಡೆ ಆವರಿಸುತ್ತಿದ್ದಂತೆ ಭಯಗೊಂಡ ಸಿಬ್ಬಂದಿ ಕೂಡಲೇ ಕಾರ್ಖಾನೆಯಿಂದ ಹೊರ ಬಂದರು. ಹಾಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಗ್ನಿಶಾಮಕದಳದ 2 ವಾಹನ ಗಳು 7.30ರ ವೇಳೆಗೆ ಕಾರ್ಖಾನೆ ಬಳಿಗೆ ಧಾವಿದವು. ಆದರೆ ಈ ವೇಳೆಗಾಗಲೇ ಬಹುತೇಕ ಕಾರ್ಖಾನೆ ಸುಟ್ಟು ಹೋಗಿತ್ತು.ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕದಳ ನಿರತವಾಯಿತು.
13 March 2010
Subscribe to:
Post Comments (Atom)
I want to join as a firefight please advice me.
ReplyDeletewhat is the term and conditions to join this job.
firefighter's are very brave.
Regards
sarkari naukri